ಅಳುವ ಕಡಲೊಳು .......
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ ।
ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ ।।
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆ ತೆರೆಗಳೋಳಿಯಲ್ಲಿ ।
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ ।।
ಎತ್ತೆತ್ತರಕ್ಕೆ ಏರುವ ಮನಕೂ ಕೆಸರ ಲೇಪ ಲೇಪ ।
ಕೊಳೆಯು ಕೊಳಚೆಯಲಿ ಮುಳುಗಿ ಕಂಡೆನೋ ಬಾನಿನೊಂದು ಪೆಂಪ ।।
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ ।
ತಮದಗಾಧ ಹೊನಲಲ್ಲು ಹೊಳೆಯುತಿದೆ ಸತ್ವವೊಂದಖಂಡ ।।
ಆಸೆಯೆಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ ।
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ ।।
ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ ।
ಹಲವು ತನದ ಮೈ ಮರೆಸುವಾಟವಿದು ನಿಜವು ತೋರದಲ್ಲ ।।
ಬೆಂಗಾಡು ನೋಡು ಇದು ಕಂಬ ಬಯಲು ದೊರಕಿಲ್ಲ ಆದಿ ಅಂತ್ಯ ।
ಅದ ತಿಳಿದೆನೆಂದು ಹಲವರುಂಟು ತಣಿದೆನೆಂದವರ ಕಾಣೆನಯ್ಯ ।।
ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾವೆಷ್ಟೋ ಮರೆತು ಮೆರೆದು ।
ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆತು ।।
------ ಗೊಪಾಲಕೃಷ್ಣ ಅಡಿಗ

No comments:
Post a Comment